ಉಡುಪಿ ಜಿಲ್ಲೆಯಲ್ಲಿ ಇನ್ಮುಂದೆ ಪ್ರತೀ ಸೋಮವಾರ ಎಸಿ ರಹಿತ ದಿನ: ಜಿಲ್ಲಾಧಿಕಾರಿ ಘೋಷಣೆ

ಉಡುಪಿ: ಪರಿಸರ ರಕ್ಷಣೆ ಹಾಗೂ ಜಾಗತಿಕ ಪರಿಸರ ತಾಪಮಾನವನ್ನು ತಗ್ಗಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯಲ್ಲಿ ಪ್ರತಿ ಸೋಮವಾರ ಎಲ್ಲಾ ಸರ್ಕಾರಿ ಕಚೇರಿಗಳ ಎಸಿಗಳನ್ನು ಆಫ್ ಮಾಡಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು ಗುರುವಾರ, ಸಮೂಹ ಸಾರಿಗೆಯಲ್ಲಿ ತಮ್ಮ ಕಚೇರಿಗೆ ತೆರಳುತ್ತಾ ಮಾತನಾಡಿದರು. ವಿಶ್ವ ಪರಿಸರ ದಿನದ ಅಂಗವಾಗಿ, ಈ ವರ್ಷದ ಘೋಷವಾಕ್ಯ, ವಾಯು ಮಾಲಿನ್ಯ ನಿಯಂತ್ರಣ ಕುರಿತಾಗಿದ್ದು, ಇದನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಕುರಿತಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ, […]