ಹೊಸ ನಿಯಮ : 30ದಿನಕ್ಕಿಂತ ಹೆಚ್ಚು ಗಳಿಕೆ ರಜೆಗೆ ವೇತನ

ನವದೆಹಲಿ: ಸೆಪ್ಟೆಂಬರ್ 07; ಉದ್ಯೋಗಿಗಳಿಗೆ ರಜೆಯ ವಿಚಾರದಲ್ಲಿ ನೆರವಾಗುವ ಹೊಸ ಕಾನೂನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಕ್ಯಾಲೆಂಡರ್ ವರ್ಷದಲ್ಲಿ 30ಕ್ಕಿಂತ ಹೆಚ್ಚು ಗಳಿಕೆ ರಜೆ ಇದ್ದರೆ ಕಂಪನಿಗಳು ಹೆಚ್ಚುವರಿ ವೇತನ ಪಾವತಿ ಮಾಡಬೇಕು ಎಂದು ನಿಯಮ ಹೇಳುತ್ತದೆ. ಶೀಘ್ರವೇ ಬರಲಿರುವ ಹೊಸ ಕಾನೂನು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಿದೆ. ಟೇಕ್ ಹೋಮ್ ವೇತನ ಮತ್ತು ಇಪಿಎಫ್‌ ಖಾತೆಗಳಿಗೆ ಸಹ ಹೆಚ್ಚಿನ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. ಅಧಿಸೂಚನೆ ಪ್ರಕಟಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ.ಈ […]