ಐಸಿಐಸಿಐ ಬ್ಯಾಂಕ್​ಗೆ ₹12 ಕೋಟಿ ದಂಡ ವಿಧಿಸಿದ ಆರ್​ಬಿಐ : ತನ್ನದೇ ನಿರ್ದೇಶಕರ ಕಂಪನಿಗಳಿಗೆ ಸಾಲ

ನವದೆಹಲಿ: ಐಸಿಐಸಿಐ ಬ್ಯಾಂಕ್ ಲಿಮಿಟೆಡ್​ನಲ್ಲಿ ನಿರ್ದೇಶಕರಾಗಿರುವ ಇಬ್ಬರು ವ್ಯಕ್ತಿಗಳು ತಾವೇ ನಿರ್ದೇಶಕರಾಗಿರುವ ಮತ್ತೊಂದು ಕಂಪನಿಗಳಿಗೆ ಸಾಲ ಮಂಜೂರು ಮಾಡಿದ್ದಕ್ಕಾಗಿ ಅಥವಾ ಸಾಲ ಮಂಜೂರಿಗೆ ಯತ್ನಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಐಸಿಐಸಿಐ ಬ್ಯಾಂಕ್​ಗೆ 12.19 ಕೋಟಿ ರೂ.ಗಳ ದಂಡ ವಿಧಿಸಿದೆ.ಸಾಲ ನೀಡುವಿಕೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರ್​ಬಿಐ ಐಸಿಐಸಿಐ ಬ್ಯಾಂಕ್​ಗೆ 12 ಕೋಟಿ ರೂ. ದಂಡ ವಿಧಿಸಿದೆ. ಬ್ಯಾಂಕಿಂಗ್ ನಿಯಂತ್ರಣ (ಬಿಆರ್) ಕಾಯ್ದೆಯ ನಿಬಂಧನೆಗಳು ಮತ್ತು ಬ್ಯಾಂಕಿಂಗ್ ನಿಯಂತ್ರಕ ಹೊರಡಿಸಿದ ನಿರ್ದೇಶನಗಳನ್ನು ಅನುಸರಿಸಲು ವಿಫಲವಾದ ಕಾರಣ ಐಸಿಐಸಿಐ […]