ಲೋಕಸಭೆಯಲ್ಲಿ 22, ರಾಜ್ಯಸಭೆಯಲ್ಲಿ 25 ಮಸೂದೆ ಅಂಗೀಕಾರ : ಮುಂಗಾರು ಅಧಿವೇಶನ ಅಂತ್ಯ

ನವದೆಹಲಿ : ಸಂಸತ್ತಿನ ಉಭಯ ಸದನಗಳನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಕೆಳಮನೆಯಲ್ಲಿ ಶೇ 45 ಮತ್ತು ಮೇಲ್ಮನೆಯಲ್ಲಿ ಶೇ 63ರಷ್ಟು ಉತ್ಪಾದಕತೆಯನ್ನು ದಾಖಲಿಸಿದ್ದ ಮುಂಗಾರು ಅಧಿವೇಶನಕ್ಕೆ ಅಂತ್ಯ ಹಾಡಲಾಗಿದೆ.ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, 23 ದಿನಗಳ ಸುದೀರ್ಘ ಅಧಿವೇಶನದಲ್ಲಿ ಒಟ್ಟು 17 ಅಧಿವೇಶನಗಳು (sittings) ನಡೆದಿವೆ ಎಂದು ಹೇಳಿದರು. ಸಂಸತ್​ ಕಲಾಪ ಇಂದು ಅಂತ್ಯಗೊಂಡಿದ್ದು, ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಲೋಕಸಭೆಯ ಉತ್ಪಾದಕತೆಯು ಶೇಕಡಾ 45 ಮತ್ತು ರಾಜ್ಯಸಭೆಯ ಉತ್ಪಾದಕತೆ […]