ನಿರೀಕ್ಷೆ ಮೀರಿದ ಸಾಧನೆ : ಅರ್ಧ ಶತಕೋಟಿ ಕಂಪ್ಯೂಟರ್ಗಳಲ್ಲಿ ಓಡುತ್ತಿದೆ ವಿಂಡೋಸ್ 11 ಓಎಸ್
ನವದೆಹಲಿ: ಮೈಕ್ರೋಸಾಫ್ಟ್ನ ವಿಂಡೋಸ್ 11 ಆಪರೇಟಿಂಗ್ ಸಿಸ್ಟಮ್ ಪ್ರಸ್ತುತ 400 ದಶಲಕ್ಷಕ್ಕೂ ಹೆಚ್ಚು ಇನ್ಸ್ಟಾಲ್ ಆಗಿದ್ದು, 2024 ರ ಆರಂಭದಲ್ಲಿ ಈ ಸಂಖ್ಯೆ 500 ಮಿಲಿಯನ್ ತಲುಪುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ವಿಂಡೋಸ್ 11 ಈಗ ಸುಮಾರು ಅರ್ಧ ಶತಕೋಟಿ ಸಾಧನಗಳಲ್ಲಿ ಸಕ್ರಿಯವಾಗಿದೆ, ಇದು ಕಂಪನಿಯ ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ ಎಂದು ಮೈಕ್ರೋಸಾಫ್ಟ್ ಆಂತರಿಕ ಡೇಟಾ ಉಲ್ಲೇಖಿಸಿ ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ.ವಿಂಡೋಸ್ 11 ಆಪರೇಟಿಂಗ್ ಸಿಸ್ಟಂ ವಿಶ್ವದ 400 ದಶಲಕ್ಷಕ್ಕೂ ಹೆಚ್ಚು ಕಂಪ್ಯೂಟರ್ಗಳಲ್ಲಿ ಇನ್ಸ್ಟಾಲ್ ಆಗಿದೆ. […]