ಯೇ ಭಾರತ್ ಕಾ ತಿರಂಗಾ ಹೈ, ಕಭೀ ಜುಕೆಗಾ ನಹೀ: ಅಮೇರಿಕಾದಲ್ಲಿ ಅಲ್ಲು ಅರ್ಜುನ್ ಡೈಲಾಗ್ ಗೆ ಭಾರೀ ಮೆಚ್ಚುಗೆ
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಇಂಡಿಯಾ ಡೇ ಪರೇಡ್ನಲ್ಲಿ ನಟ ಅಲ್ಲು ಅರ್ಜುನ್ ಅವರು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಪುಷ್ಪಾ ಡೈಲಾಗ್ ರೀತಿಯಲ್ಲಿ “ಯೇ ಭಾರತ್ ಕಾ ತಿರಂಗಾ ಹೈ, ಕಭೀ ಜುಕೆಗಾ ನಹೀ” ಎಂದಿದ್ದಾರೆ. ಇದರ ವಿಡೀಯೋ ತುಣುಕೊಂದು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಡೈಲಾಗ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪುಷ್ಪಾ ಖ್ಯಾತಿಯ ತೆಲುಗು ನಟ ಇತ್ತೀಚೆಗೆ ನ್ಯೂಯಾರ್ಕ್ನಲ್ಲಿದ್ದರು. ಅಲ್ಲಿ ಅವರು ಅಮೇರಿಕಾದಲ್ಲಿನ ಭಾರತೀಯರು ಆಯೋಜಿಸಿದ್ದ ಅತ್ಯಂತ ಪ್ರಸಿದ್ಧ ವಾರ್ಷಿಕ […]