ಕಿನ್ನಿಮೂಲ್ಕಿಯಲ್ಲಿ ನೇತ್ರಜ್ಯೋತಿ ಸಂಸ್ಥೆಗಳ ನೂತನ ಕಟ್ಟಡ ಶುಭಾರಂಭ.

ಉಡುಪಿ: ನೇತ್ರ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಸೈನ್ಸಸ್ ಕಾಲೇಜು, ನೇತ್ರ ಜ್ಯೋತಿ ಫಿಸಿಯೋಥೆರಪಿ ಕಾಲೇಜು, ನೇತ್ರ ಜ್ಯೋತಿ ಕಾಲೇಜು ವತಿಯಿಂದ 76ಬಡಗಬೆಟ್ಟು ಕಿನ್ನಿಮೂಲ್ಕಿಯಲ್ಲಿ ನೇತ್ರ ಜ್ಯೋತಿ ಸಂಸ್ಥೆಗಳ ನೂತನ ಕಟ್ಟಡ ಶುಕ್ರವಾರ ಉದ್ಘಾಟನೆಗೊಂಡಿತು. ನೂತನ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ನೇತ್ರಜ್ಯೋತಿ ಆಸ್ಪತ್ರೆಯಿಂದ ಸಮಾಜಕ್ಕೆ ಒಳ್ಳೆಯ ಸೇವಾಕಾರ್ಯ ಪ್ರಾಪ್ತಿ ಆಗಲಿ. ದೇವರು ಕರುಣಿಸಿದ ಕಣ್ಣು ಜಗತ್ತಿಗೆ ದಿವ್ಯ ದೃಷ್ಟಿ ನೀಡುವಂತದ್ದು. […]