ನೆಲ್ಯಾಡಿ: ಅಕ್ರಮ ಜಾನುವಾರು ಸಾಗಾಟ; ಓರ್ವ ಬಂಧನ; 22 ಜಾನುವಾರು ವಶ

ಮಂಗಳೂರು: ಹಾಸನದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಕೋಲ್ಪೆಯಲ್ಲಿ ಪತ್ತೆಹಚ್ಚಿದ್ದಾರೆ. ನೆಲ್ಯಾಡಿ ಪೊಲೀಸರು ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಲಾರಿಯನ್ನು ತಡೆದು 22 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ತುಮಕೂರು ನಿವಾಸಿ ನವಾಝ್ ಬಂಧಿತ ಆರೋಪಿ. ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ಪೊಲೀಸ್ ವಾಹನವನ್ನು ಕಂಡು ಪರಾರಿಯಾಗಲು ಯತ್ನಿಸಿದ ಲಾರಿಯನ್ನು ಬೆನ್ನಟಿದ ಪೊಲೀಸರು ಕೋಲ್ಪೆಯಲ್ಲಿ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ 22 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದುದು ಪತ್ತೆಯಾಯಿತು ಎಂದು ಪೊಲೀಸರು […]