ನೇಜಾರಿನಲ್ಲಿ ಹಿಂದೂ ಬಾಂಧವರಿಂದ ತಂಪು ಪಾನೀಯ ವಿತರಣೆ
ಉಡುಪಿ: ನೇಜಾರು ಜಾಮೀಯ ಮಸೀದಿ ವತಿಯಿಂದ ನಡೆದ ಈದ್ ಮಿಲಾದ್ ರ‌್ಯಾಲಿಯಲ್ಲಿ ಹಿಂದೂ ಭಾಂಧವರು ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಕೋಮುಸೌಹಾರ್ದತೆಯನ್ನು ಮೆರೆದರು. ಮಸೀದಿಯಿಂದ ಹೊರಟ ರ್ಯಾಲಿಯು ಸಂತೆಕಟ್ಟೆ, ಕಲ್ಯಾಣಪುರ ತಲುಪಿ, ಅಲ್ಲಿಂದ ವಾಪಾಸ್ಸು ನಿಡಂಬಳ್ಳಿ ಮಾರ್ಗವಾಗಿ ನೇಜಾರು ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಸುಮಾರು ಐದು ಕಿ.ಮೀ. ಉದ್ದ ಸಾಗಿ ಬಂದ ಮೆರವಣಿಗೆ ಯಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ನೇಜಾರು ಮಸೀದಿ ಅಧ್ಯಕ್ಷ ಅಯ್ಯುಬ್ ಸಾಹೇಬ್, ಖತೀಬ್ ಉಸ್ಮಾನ್ ಮದನಿ, […]