ಆಚಾರ್ಯಾಸ್ ಏಸ್: ಜೂನ್ ಮೊದಲ ವಾರದಿಂದ ಹೊಸ ಬ್ಯಾಚ್ ಪ್ರಾರಂಭ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ವತಿಯಿಂದ ಒಂಬತ್ತನೇ ಮತ್ತು ಹತ್ತನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ, ಸಿ.ಇ.ಟಿ, ನೀಟ್, ಜೆ.ಇ.ಇ ಮುಂತಾದವುಗಳ ತರಬೇತಿಯ ಹೊಸ ಬ್ಯಾಚ್ ಜೂನ್ ಮೊದಲ ವಾರದಿಂದ ಆರಂಭವಾಗಲಿದೆ. ಕಳೆದ 8 ವರ್ಷಗಳಲ್ಲಿ ಹತ್ತನೇ ತರಗತಿ, ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಶ್ರೇಯಾಂಕಗಳನ್ನು ಗಳಿಸಿರುವ ಆಚಾರ್ಯಾಸ ಏಸ್ ಈ ಭಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿಯನ್ನು ಆಯೋಜಿಸಿದೆ. […]

ನೀಟ್ 2022: ನೋಂದಣಿ ದಿನಾಂಕ ಮೇ 15 ರವರೆಗೆ ವಿಸ್ತರಣೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ ನೋಂದಣಿ ಗಡುವನ್ನು ವಿಸ್ತರಿಸಿದೆ. 2022 ರ ನೀಟ್ ಅರ್ಜಿ ಪ್ರಕ್ರಿಯೆಯನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ. ಮೊದಲು ನೀಟ್ ಪದವಿಪೂರ್ವ-2022 ಪರೀಕ್ಷೆಗೆ ನೋಂದಾಯಿಸಲು ಕೊನೆಯ ದಿನಾಂಕ ಮೇ 6 ಆಗಿತ್ತು. ವೈದ್ಯಕೀಯ ಆಕಾಂಕ್ಷಿಗಳು ಎನ್.ಟಿ.ಎ ನೀಟ್ ಯುಜಿ ಗಾಗಿ ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು. ಜುಲೈ 17 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಯು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು 200 […]

ನೀಟ್: ಕಾರ್ಕಳದ ಜ್ಞಾನಸುಧಾ ಕಾಲೇಜು ಸಾಧನೆ

ಕಾರ್ಕಳ: ಎಂಬಿಬಿಎಸ್‌ ಹಾಗೂ ವೈದ್ಯಕೀಯ ಕೋರ್ಸ್‌ ಗಳ ಪ್ರವೇಶ ಪರೀಕ್ಷೆಯಾದ ರಾಷ್ಟ್ರ ಮಟ್ಟದ ನೀಟ್‌ನಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಒಟ್ಟು720 ಅಂಕಗಳಲ್ಲಿ ಇಬ್ಬರು ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 19 ವಿದ್ಯಾರ್ಥಿಗಳು 500ರಿಂದ 600ರ ನಡುವಿನ ಅಂಕಗಳನ್ನು, 23 ವಿದ್ಯಾರ್ಥಿಗಳು 400ರಿಂದ 500ರ ನಡುವಿನ ಅಂಕಗಳನ್ನು ಗಳಿಸಿದ್ದಾರೆ. ನವೀನ್‌ ಎಂ. ಪಾಟೀಲ್ – 617 ಅಂಕ, ಎಂ.ಎಸ್‌. ಸುಮುಖ ಮಂಜ – 600 ಅಂಕ ಗಳಿಸಿದ್ದಾರೆ.