ಸಹಜ ಭಕ್ತಿಗೆ ಒಲಿಯುತ್ತಾನೆ ಪಿಲಾರ್ ಖಾನದ ಶಿವ : ಕಾಡ ನಡುವೆ ಕಾಡುವ ಈ ಶಿವಮಂದಿರಕ್ಕೊಮ್ಮೆ ಬನ್ನಿ

ಇಲ್ಲಿನ ದೇವರಿಗೆ ಆಡಂಭರವಿಲ್ಲ. ಸಿಂಗಾರದ ಹೊರೆಯಿಲ್ಲ, ಬಂಗಾರ ವೈಢೂರ್ಯಗಳ ಹಂಗು ಮೊದಲೇ ಇಲ್ಲ. ಕಾಡಿನ ನೀರವದಲ್ಲಿ ಹಸಿರಿನ ಉನ್ಮತ್ತ ನಗುವಿನ ಮದ್ಯೆ ನಿರಾಡಂಬರವಾಗಿ ಕೂತ ಮಹಾಲಿಂಗೇಶ್ವರ ದೇವರು ಕಾಡ ಜೀವಗಳನ್ನು ಪೊರೆಯುತ್ತಲೋ, ಅವರ ಭಕ್ತಿ ಭಾವಗಳಿಗೆ ಸಂತುಷ್ಟನಾಗುತ್ತಲೋ ಕೂತ ಪರಿಯೇ ನೋಡಲು ಚೆಂದ. ಮನಸ್ಸು ಶಾಂತವಾಗಲು ಇಲ್ಲಿಗೊಮ್ಮೆ ಬರಬೇಕು. ಇದು ಶಿವನ ತಾಣ  ಕಾರ್ಕಳ ತಾಲೂಕಿನ ಮುದರಂಗಡಿ ಗ್ರಾಮದ ಪಿಲಾರ್‌ಖಾನ ಎಂಬಲ್ಲಿ ಕಾಡಿನ ಸೆರಗಲ್ಲಿರುವ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಬಂದರೆ ಮನ ಭಕ್ತಿಯ ಸಡಗರದಲ್ಲಿ ಕಳೆದು ಹೋಗುತ್ತದೆ. […]