ಉಗುರಿನ ಆರೈಕೆ ಮಾಡಿ ಹಗುರಾಗಿ: ಚಂದದ ಉಗುರಿಗಾಗಿ ಇಷ್ಟೆಲ್ಲಾ ಮಾಡಲೇಬೇಕು

  ಸ್ವಸ್ಥ ಸುಂದರವಾದ ಉಗುರು ಎಲ್ಲರಿಗೂ ಇಷ್ಟ. ಉಗುರು ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಕೆಲವು ಕಾರಣಗಳಿಂದ ಉಗುರುಗಳು ತಮ್ಮ ಸಹಜ ಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಇದು ಉಗುರುಗಳ ಸೊಂಕು  ಅಥವಾ ನಮ್ಮ ದೇಹದೊಳಗಿನ ಕೆಲವು ಸಮಸ್ಯೆಗಳಿಂದ ಕೂಡ ಆಗಬಹುದು. ಇಲ್ಲಿ ಉಗುರಿನ ಆರೈಕೆ ಬಗ್ಗೆ ನೀವು ಪಾಲಿಸಲೇಬೇಕಾದ ಒಂದಷ್ಟು ಟಿಪ್ಸ್ ಗಳನ್ನು ನೀಡಿದ್ದಾರೆ ಡಾ.ಹರ್ಷಾ ಕಾಮತ್. ಉಗುರಿನ ಅಸಹಜತೆ ಬಗ್ಗೆ ನಿಮ್ಗೆ ಗೊತ್ತಿರಲಿ:  ಉಗುರಿನ ಮೇಲೆ ಉದ್ದದ ರೇಖೆಗಳು ಕಂಡುಬಂದಲ್ಲಿ  ಅಗ್ನಿ ಮಾಂದ್ಯ ,ವಿಷಮಾಗ್ನಿ ಹಾಗೂ ಅಜೀರ್ಣತೆಯನ್ನು […]