ಕುಂದಾಪುರ ತಾಲೂಕಿನಾದ್ಯಂತ ನಾಗರಪಂಚಮಿ ಸಂಭ್ರಮ; ಕಲಿಯುಗದ ಪ್ರತ್ಯಕ್ಷ ದೇವ ನಾಗನಿಗೆ ನಾಗರಪಂಚಮಿ ಸಂಭ್ರಮ

ಕುಂದಾಪುರ: ಕರಾವಳಿಯಲ್ಲಿ ನಾಗನಿಗೆ ಹರಕೆ ಸೇವೆಗಳು ಸಲ್ಲಿಸುವ ಸಂಪ್ರದಾಯ ಹೆಚ್ಚು. ಷಷ್ಠಿ ಮಹೋತ್ಸವ, ಕಿರುಷಷ್ಠಿ ನಾಗನ ಮೂಲ ಸ್ಥಾನ ಹಾಗೂ ದೇವಸ್ಥಾನಗಳಲ್ಲಿ ಆಚರಣೆಯಾದರೇ ನಾಗರ ಪಂಚಮಿ ಹಬ್ಬವೆನ್ನುವುದು ಪ್ರಸಿದ್ಧ ದೇವಸ್ಥಾನಗಳನ್ನೊಳಗೊಂಡಂತೆ ವಿವಿಧ ನಾಗ ಬನಗಳಲ್ಲಿಯೂ ಆಚರಿಸಲ್ಪಡುತ್ತದೆ. ಅಂತೆಯೇ ಕುಂದಾಪುರದಲ್ಲಿ ನಡೆದ ನಾಗರ ಪಂಚಮಿಯ ವಿಶೇಷ ಇಲ್ಲಿದೆ ನೋಡಿ. ಕರಾವಳಿಯ ಬಹುದೊಡ್ಡ ಹಬ್ಬವಾದ ನಾಗರ ಪಂಚಮಿಯನ್ನು ಕುಂದಾಪುರ ತಾಲೂಕಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗಿನಿಂದಲೇ ನಾಗಬನ ಹಾಗೂ ನಾಗ ದೇವಸ್ಥಾನಗಳಿಗೆ ಆಗಮಿನಿಸಿದ ಭಕ್ತರು ನಾಗನಿಗೆ ಹಾಲು, ಎಳನೀರು ಕೇದಗೆ ಹೂವನ್ನು […]