ಯಾರು ಸಂವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೋ ಅವರು ಸಂವಿಧಾನವನ್ನು ಪಾಲಿಸಬಲ್ಲರು: ನ್ಯಾ| ಪ್ರಕಾಶ್ ಖಂಡೇರಿ
ಕುಂದಾಪುರ: ಯಾರು ಸಂವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೋ ಅವರು ಸಂವಿಧಾನವನ್ನು ಪಾಲಿಸಬಲ್ಲರು ಕೂಡಾ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ತನ್ನ ಕೊಡುಗೆಯನ್ನು ನೀಡುವ ವ್ಯಕ್ತಿಯೇ ನಿಜವಾದ ದೇಶಪ್ರೇಮಿ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಪ್ರಕಾಶ್ ಖಂಡೇರಿ ಹೇಳಿದರು. ಅವರು ಸಮುದಾಯ, ಕಾನೂನು ಸೇವಾ ಸಮಿತಿ, ಬಾರ್ ಅಸೋಸಿಯೇಷನ್ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಜೊತೆಯಾಗಿ ಹಮ್ಮಿಕೊಂಡ “ನಮ್ಮ ಸಂವಿಧಾನ- ಸಂವಿಧಾನ ಓದು” ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆಯನ್ನು ಓದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಸುಮಂಗಲಾ […]