ನಾಳೆಯಿಂದ ಆನೆಗಳ ತಾಲೀಮು ಶುರು: ದಸರಾ ಮಹೋತ್ಸವದಲ್ಲಿ ಭಾಗವಹಿಸುವ 14 ಆನೆಗಳ ತೂಕ ಪರೀಕ್ಷೆ
ಮೈಸೂರು: .ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ಹಾಗೂ ಎರಡನೇ ಗಜಪಡೆಯ ಹದಿನಾಲ್ಕು ಆನೆಗಳ ತಂಡ ಮೈಸೂರಿನ ಅರಮನೆಯಲ್ಲಿ ಬೀಡು ಬಿಟ್ಟಿದ್ದು ಇಂದು ಹದಿನಾಲ್ಕು ಆನೆಗಳ ತೂಕ ಪರೀಕ್ಷೆಯನ್ನ ಮಾಡಲಾಯಿತು. ದಸರಾ ಆನೆಗಳಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿರುವ ಮಾಜಿ ಕ್ಯಾಪ್ಟನ್ ಅರ್ಜುನ ಆನೆ 5680 ಕೆಜಿ ತೂಕ ಹೊಂದಿ ಅತ್ಯಂತ ಬಲಶಾಲಿ ಎಂಬ ಹೆಗ್ಗಳಿಕೆಯನ್ನು ಮತ್ತೆ ಉಳಿಸಿಕೊಂಡಿದೆ. ಮೊದಲ ಬಾರಿಗೆ ಜಂಬುಸವಾರಿಯ ಕ್ಯಾಪ್ಟನ್ ಅಭಿಮನ್ಯು ಆನೆ ತೂಕ ಸೆ. 6 ರಂದು 5160 ಕೆಜಿ ಇತ್ತು. ಈ […]