ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಬೆಂಗಳೂರು: ಇಲ್ಲಿನ ಬ್ರಿಗೇಡ್ ರಸ್ತೆ ಸಮೀಪದ ಡ್ಯೂಯೇಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ (45)ಯನ್ನು ಕೊಲೆ ಮಾಡಿದ ನಾಲ್ವರು ಹಂತಕರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೊಡಗಿನ ಸೋಮವಾರಪೇಟೆಯ ಶಶಿಕಿರಣ ಅಲಿಯಾಸ್ ಮುನ್ನಾ (45), ನಿತ್ಯ (29), ಮಂಗಳೂರಿನ ಗಣೇಶ್ (39) ಹಾಗೂ ಬಂಟ್ವಾಳದ ಅಕ್ಷಯ್ (32) ಎಂದು ಗುರುತಿಸಲಾಗಿದೆ. ಹತ್ಯೆ ಬಳಿಕ ಆರೋಪಿಗಳು ಬೆಂಗಳೂರಿನ ಗಾಂಧಿನಗರದ ವಸತಿಗೃಹವೊಂದರಲ್ಲಿ ತಲೆ ಮರೆಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಮೇಲೆ […]