ನಗರಸಭಾ ವ್ಯಾಪ್ತಿಯ ಕಟ್ಟಡಗಳ ಮಾಹಿತಿಯನ್ನು ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲಿಸಿ

ಉಡುಪಿ ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲಿಕರು ಮತ್ತು ಅನುಭೋಗದಾರರು ಈಗಾಗಲೇ ಇ-ಖಾತೆ ಪಡೆದವರನ್ನು ಹೊರತುಪಡಿಸಿ, ಉಳಿದ ಕಟ್ಟಡಗಳನ್ನು ಗಣಿಕೀಕರಣ ಮಾಡಲು ಪೌರಾಡಳಿತ ನಿರ್ದೇಶನಾಲಯವು ಆಸ್ತಿ ಕಣಜ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಸ್ಥಳೀಯ ಸಂಸ್ಥೆಯ ಎಲ್ಲಾ ಕಟ್ಟಡಗಳನ್ನು ಆನ್‌ಲೈನ್ ಮಾಡಬೇಕಾಗಿದ್ದು, ಆಸ್ತಿ ಕಣಜ ತಂತ್ರಾಂಶದಲ್ಲಿ ಈ ಕೆಳಗೆ ನಮೂದಿಸಲಾದ ದಾಖಲೆಗಳನ್ನು ಕಡ್ಡಾಯವಾಗಿ ದಾಖಲಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ. ಕಟ್ಟಡವಾಗಿದ್ದಲ್ಲಿ: ಕಟ್ಟಡದ ಮಾಲೀಕರ ಭಾವಚಿತ್ರ ಮತ್ತು ಆಧಾರ್ ಹೊರತುಪಡಿಸಿ, ಒಂದು ಗುರುತಿನ ದಾಖಲೆ, ಮೊಬೈಲ್ ನಂಬರ್ ಮತ್ತು ಇ-ಮೇಲ್ […]

ನಾಳೆ ನಗರಸಭೆ ಬಜೆಟ್ ತಯಾರಿ ಬಗ್ಗೆ ಪೂರ್ವಭಾವಿ ಸಭೆ

ಉಡುಪಿ: ಉಡುಪಿ ನಗರಸಭೆಯ 2023-24 ನೇ ಸಾಲಿನ ಬಜೆಟ್ ತಯಾರಿಯ ಬಗ್ಗೆ ನಗರಸಭಾ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಅವಶ್ಯಕ ಅಭಿವೃದ್ಧಿ ಕೆಲಸ ಕಾರ್ಯಗಳ ವಿಚಾರ ವಿನಿಮಯಗಳ ಕುರಿತು ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯು ಜನವರಿ 24 ರಂದು ಮಧ್ಯಾಹ್ನ 3.30 ಕ್ಕೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

ಸೈಂಟ್ ಮೇರಿಸ್ ದ್ವೀಪದಲ್ಲಿ ಶುಲ್ಕ ರಹಿತ ಕ್ಯಾಮರಾ ಬಳಕೆಗೆ ಅವಕಾಶ

ಉಡುಪಿ: ಮಲ್ಪೆ ಅಭಿವೃದ್ಧಿ ಸಮಿತಿಯಿಂದ 2020ರ ಸಾಲಿನಲ್ಲಿ ಸೀವಾಕ್ ಪ್ರದೇಶ ಮತ್ತು ಸೈಂಟ್‌ಮೆರೀಸ್ ದ್ವೀಪ ಪ್ರದೇಶದ ನಿರ್ವಹಣೆ ಕುರಿತು ಕರೆಯಲಾದ ಟೆಂಡರಿನಲ್ಲಿ ದ್ವೀಪದಲ್ಲಿ ಕೈಗೊಳ್ಳುವ ಯಾವುದೇ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವಂತಹ (Commercial Activities like photo shoot) ಡಿ.ಎಸ್.ಎಲ್.ಆರ್ ಕ್ಯಾಮರಾಗಳಿಗೆ ಶುಲ್ಕ ವಿಧಿಸಿ ನಿರ್ವಹಣಾದಾರರಿಗೆ ಆದಾಯಗಳಿಸುವ ಬಗ್ಗೆ ಅವಕಾಶವಿರುತ್ತದೆ ಹಾಗೂ ಇತರೆ ರೀತಿಯ ಕ್ಯಾಮರಗಳಾದ ಸೋನಿ ಹ್ಯಾಂಡಿ ಕ್ಯಾಮ್, ಕ್ಯಾನೋನ್ ಇ.ಒ.ಎಸ್, ಡಿಜಿಟಲ್ ಕ್ಯಾಮರಾ, ಸೋನಿ ಹೆಚ್.ಡಿ.ಆರ್.ಸಿ.ಎಕ್ಸ್ ಕ್ಯಾಮರಾಗಳನ್ನು ಮತ್ತು ಮೊಬೈಲ್‌ಗಳನ್ನು ಸೈಂಟ್‌ಮೆರೀಸ್ ದ್ವೀಪದಲ್ಲಿ ಬಳಸಲು ಯಾವುದೇ […]

ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಶ ಕೊಡವೂರು ನೇಮಕ

ಉಡುಪಿ: ಪ್ರಸಕ್ತ ಸಾಲಿಗೆ ಉಡುಪಿ ನಗರಸಭೆಯ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಮೂಡಬೆಟ್ಟು ವಾರ್ಡಿನ ಸದಸ್ಯ ಶ್ರೀಶ ಕೊಡವೂರು ಅವರನ್ನು ಆಯ್ಕೆ ಮಾಡಲಾಗಿದೆ. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಪ್ರಭು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸಭೆಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರಾದ ಸಂಪಾವತಿ, ಸಂತೋಷ್ ಜತ್ತನ್, ಡಿ. ಬಾಲಕೃಷ್ಣ ಶೆಟ್ಟಿ, ಯೋಗೀಶ್ ವಿ ಸಾಲ್ಯಾನ್, ಮಾನಸ ಸಿ ಪೈ, ಭಾರತಿ ಪ್ರಶಾಂತ್, ಜಯಂತಿ […]

346 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ ವಶ; ದಂಡವಸೂಲಿ: ನಗರಸಭೆ ಅಧಿಕಾರಿಗಳಿಂದ ಕಾರ್ಯಾಚರಣೆ

ಉಡುಪಿ: ನಗರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಆದಿ ಉಡುಪಿ ಎ.ಪಿ.ಎಮ್.ಸಿ ಮಾರುಕಟ್ಟೆ ಬಳಿ ನಿಷೇದಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಮಾರುತಿ ಓಮಿನಿ ವಾಹನದ ಮೇಲೆ ದಾಳಿ ನಡೆಸಿ 346 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 10,000 ರೂ. ದಂಡ ಹಾಗೂ ಅಜ್ಜರಕಾಡು ಪಾರ್ಕ್ ರಸ್ತೆ ಬಳಿ ತ್ಯಾಜ್ಯವನ್ನು ಸುಡುತ್ತಿರುವವರಿಗೆ 5000 ರೂ. ದಂಡ ವಿಧಿಸಿದರು. ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಸ್ಯಾನೀಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಸಾರ್ವಜನಿಕರು, ಉದ್ದಿಮೆದಾರರು ಹಾಗೂ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಉಪಯೋಗಿಸುವುದು […]