ಮುಲ್ಕಿ: ರೈನ್ ಕೋಟ್ ಹಾಕಲು ಸ್ಕೂಟರ್ ನಿಲ್ಲಿಸಿದವರ ಮೇಲೆರಗಿದ ಕಾರು; ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಸಹೋದರಿಯ ದಾರುಣ ಅಂತ್ಯ

ಮಂಗಳೂರು: ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ರೈನ್‌ಕೋಟ್ ಧರಿಸುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಲ್ಕಿಯ ಪಾವಂಜೆಯ ರಾಷ್ಟ್ರೀಯ ಹೆದ್ದಾರಿ66ರಲ್ಲಿ ಸಂಭವಿಸಿದೆ.ಬಂಗ್ರಕುಳೂರು ನಿವಾಸಿ ಶ್ರುತಿ ಆಚಾರ್ಯ (27) ಮೃತ ದುರ್ದೈವಿ. ಅವರ ಜೊತೆಗಿದ್ದ ತಂದೆ ಗೋಪಾಲ್ ಆಚಾರ್ಯ (53) ಮತ್ತು ಅಲ್ಲೇ ಪಕ್ಕದಲ್ಲಿದ್ದ ಕೈರುನ್ನಿಸಾ (52) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಗೆ ಶ್ರುತಿ ಮತ್ತು ಆಕೆಯ ತಂದೆ ರೈನ್ ಕೋಟ್ ಧರಿಸಲು ರಸ್ತೆ […]