ಪ್ರೋ. ನರೇಂದ್ರ ಎಲ್ ನಾಯಕ್ ಅವರ ಷಷ್ಟಬ್ದಿ ‘ನಮ್ಮೊಲುಮೆ’ ಸಂಮಾನ ಸಮಾರಂಭ ಮತ್ತು ಕುಪ್ಮಾ ಸದಸ್ಯರ ಸಮಾಗಮ
ಮೂಡುಬಿದಿರೆ: ಮೂಲತಃ ಕೃಷಿ ಕುಟುಂಬದಿಂದ ಬಂದ ಪ್ರೋ ನರೇಂದ್ರ ನಾಯಕ್‍ರು ಶೈಕ್ಷಣಿಕ ಕ್ಷೇತ್ರದಲ್ಲೂ ಕೃಷಿಯ ಮೂಲಸತ್ವಗಳನ್ನು ಆಳವಡಿಸಿಕೊಂಡು, ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಶೈಕ್ಷಣಿಕ ಕೃಷಿಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ(ಕುಪ್ಮಾ) ಅಧ್ಯಕ್ಷ ಡಾ ಎಂ ಮೋಹನ ಆಳ್ವ ನುಡಿದರು. ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮೂಡುಬಿದಿರೆಯ ಆಳ್ವಾಸ್‍ನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಕಲಾ ಪ್ರೇಮಿ, ಶಿಕ್ಷಣ […]