ಮೂಡಬಿದಿರೆ: ವಿದ್ಯುತ್ ಶಾಕ್, ಯುವಕ ದುರ್ಮರಣ
ಮೂಡಬಿದಿರೆ: ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ಬೆಳುವಾಯಿಯಲ್ಲಿ ಸಂಭವಿಸಿದೆ. ಮೂಡಬಿದ್ರೆಯ ಬೆಳುವಾಯಿ ನಿವಾಸಿ ಕೀರ್ತಿ(30) ಮೃತಪಟ್ಟ ಯುವಕ. ಬೆಳಗ್ಗೆ ಅಡಿಕೆ ಕೀಳಲೆಂದು ಮರವೇರಿದ್ದ ಯುವಕ ಮರದ ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದರು. ಈ ವೇಳೆ ಮರದಿಂದ ಕೆಳಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ.