ವೀಕ್ಷಕರ ಮನಗೆದ್ದ “ಬಣ್ಣ” ಕಿರು ಚಿತ್ರ: ಯೂ ಟ್ಯೂಬ್ ನಲ್ಲಿ ಸಕತ್ ಹಿಟ್ ಆಯ್ತು ‘ಬಣ್ಣ’

ಸದ್ಗುರು ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಸದಾನಂದ ಉಡುಪಿ ನಿರ್ದೇಶನದ “ಬಣ್ಣ” ಕಿರುಚಿತ್ರ ಯುಟ್ಯೂಬ್ ನಲ್ಲಿ  ಬಿಡುಗಡೆಯಾಗಿ ವೀಕ್ಷಕರ ಮನಗೆದ್ದಿದೆ. ಈ ಕಿರುಚಿತ್ರ ಕೋಮು ಸಾಮರಸ್ಯದ ಕಥಾಹಂದರವುಳ್ಳ ಕಥೆಯಾಗಿದೆ. ಒಂದು ಸಾಮಾನ್ಯ ಹಳ್ಳಿಯಲ್ಲಿಯೂ ಒಂದು ಚಿಕ್ಕ ಘಟನೆ ಹೇಗೆ ಕೋಮುವಾದದ ಬಣ್ಣಕ್ಕೆ ತಿರುಗುತ್ತದೆ, ಈಗಿನ ಯುವ ಜನಾಂಗ ಆ ಘಟನೆಗೆ ಯಾವ ರೀತಿ ಸ್ಪಂದಿಸುತ್ತಾರೆ ಹಿಂದಿನ ಪೀಳಿಗೆ ಮತ್ತು ಇಂದಿನ ಪೀಳಿಗೆ ಆ ಘಟನೆಯನ್ನು ನೋಡುವ ದೃಷ್ಟಿಕೋನ,  ಊರಿನ ಹಿರಿಯ ಮಾಸ್ಟರ್ ಆ ಯುವ ಜನಾಂಗವನ್ನು ತಿದ್ದುವ ರೀತಿ ಎಲ್ಲಾ ಸೊಗಸಾಗಿ ಮೂಡಿ […]