ರಣ್ಬೀರ್ - ಆಲಿಯಾ ಜೋಡಿ ಕರೀಷ್ಮಾ ಕಪೂರ್ ಜೊತೆ ನ್ಯೂಯಾರ್ಕ್ ಸುತ್ತಾಟ
ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡ ಸೆಲೆಬ್ರಿಟಿ ಕಪಲ್ ರಜಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಇವರಿಬ್ಬರು ತಮ್ಮ ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಆದರೂ ತಾರಾ ಜೋಡಿಯ ಅಮೆರಿಕದ ಟ್ರಿಪ್ನ ಪೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಬಾಲಿವುಡ್ ಸುಂದರ ಜೋಡಿ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಪ್ರಸ್ತುತ ಅಮೆರಿಕದಲ್ಲಿದ್ದಾರೆ.ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ದಂಪತಿ ನಟಿ ಕರೀಷ್ಮಾ ಕಪೂರ್ ಜೊತೆ ನ್ಯೂಯಾರ್ಕ್ನಲ್ಲಿ ಸುತ್ತಾಡಿರುವ ಫೋಟೋಗಳು ವೈರಲ್ ಆಗುತ್ತಿದೆ. ಪೋಸ್ಟ್ ಹಂಚಿಕೊಂಡ ಕರೀಷ್ಮಾ, […]