ಒಂದು ವರ್ಷ ಪೂರೈಸಿದ ರಕ್ಷಿತ್ ಶೆಟ್ಟಿ ಸಿನಿಮಾ: Charlie 777 ‘ಚಾರ್ಲಿ’ಯನ್ನು ಅಪ್ಪಿ ಒಪ್ಪಿಕೊಂಡ ದಿನ
Charlie 777: ಅಂದು ಜೂನ್ 10, ಇಡೀ ಕರ್ನಾಟಕಕ್ಕೆ ‘ಚಾರ್ಲಿ’ ಪರಿಚಯವಾದ ದಿನ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ನಟನೆಗೆ ಕನ್ನಡಿಗರು ಮತ್ತೊಮ್ಮೆ ಮನಸೋತ ದಿನ.ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಸಿನಿಮಾ ಒಂದು ವರ್ಷ ಪೂರೈಸಿದೆ. ಕಿರಣ್ ರಾಜ್ರಂತಹ ಅದ್ಭುತ ನಿರ್ದೇಶಕ ಸ್ಯಾಂಡಲ್ವುಡ್ಗೆ ಎಂಟ್ರಿಯಾದ ದಿನ. ಹೌದು, ಕಳೆದ ವರ್ಷ ಇದೇ ದಿನದಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ ಚಿತ್ರ ‘ಚಾರ್ಲಿ 777’, ಇಂದು ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಯಾವುದೇ […]