ಪ್ರೇಕ್ಷಕರಿಗೆ ಬಿಗ್​ ಆಫರ್​ ನೀಡಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತಂಡ , ಬುಕ್​ ಮೈ ಶೋನಲ್ಲಿ 2 ಟಿಕೆಟ್​ ತಗೊಂಡ್ರೆ 1 ಫ್ರೀ

ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ವೀರೇಶ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅನುಶ್ರೀ ಟಿಕೆಟ್ ವಿತರಿಸಿದರು. ಬಳಿಕ ಅಭಿಮಾನಿಯಾಗಿ ಈ ಸಿನಿಮಾದ ಸಕ್ಸಸ್ ಸೆಲೆಬ್ರೇಟ್ ಮಾಡುವುದಾಗಿ ಹೇಳಿದರು. ಯುವ ಪ್ರತಿಭೆಗಳ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬುಕ್​ ಮೈ […]