ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜನಿಕಾಂತ್ ಜೈಲರ್ ಸಿನಿಮಾ ನೋಡಲು ರಜೆ
ಭಾರತ ಮಾತ್ರವಲ್ಲ, ವಿಶ್ವದ ನಾನಾ ಕಡೆಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಯಾರೆಂಬ ಪ್ರಶ್ನೆಗೆ ಬಹುತೇಕ ಸಿನಿರಸಿಕರ ಬಾಯಲ್ಲಿ ಮೊದಲು ಬರುವ ಉತ್ತರವೇ ರಜನಿಕಾಂತ್. ಹೀಗಿರುವಾಗ ಅವರ ಹೊಸ ಸಿನಿಮಾಗಳ ಬಗ್ಗೆ ಫ್ಯಾನ್ಸ್ ಕ್ರೇಜ್ ಹೇಗಿರಬಹುದು ಎಂಬುದನ್ನು ನೀವೇ ಒಮ್ಮೆ ಊಹಿಸಿ. ತಮ್ಮ ಮೆಚ್ಚಿನ ನಟನ ಹೊಚ್ಚ ಹೊಸ ಸಿನಿಮಾ ವೀಕ್ಷಿಸಲು ಇದೀಗ ಕಟ್ಟಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.ರಜನಿಕಾಂತ್. ಈ ಹೆಸರು ಕೇಳುತ್ತಿದ್ದಂತೆ ವಿಶಿಷ್ಟ ಮ್ಯಾನರಿಸಂ ಹೊಂದಿರುವ ವ್ಯಕ್ತಿಯೊಬ್ಬರು ಥಟ್ಟನೆ ನೆನಪಾಗುತ್ತಾರೆ.ಜೈಲರ್ ಸಿನಿಮಾ ವೀಕ್ಷಿಸಲು ಚೆನ್ನೈ, ಮಧುರೈ […]