ಮೂಡುಬಿದಿರೆ:ಸಂಪನ್ಮೂಲ ಸೀಮಿತ, ಜನಸಂಖ್ಯೆ ಮಾತ್ರ ಅನಿಯಂತ್ರಿತ: ಡಾ ಮರಿಯಪ್ಪ

ವಿದ್ಯಾಗಿರಿ:ಸಮಾಜದಿಂದ ಎಲ್ಲವನ್ನು ಪಡೆದು, ಸಮಾಜಕ್ಕೆ ಹಿಂತಿರುಗಿಸುವ ಬದ್ಧತೆಯನ್ನು ಪ್ರತಿಯೊಬ್ಬರು ಹೊಂದಿರಬೇಕು. ಇದು ದೇಶದ ಸಮತೋಲಿತ ಬೆಳವಣಿಗೆಗೆ ಸಹಕಾರಿ ಎಂದು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಮಾನವಿಕ ವಿಭಾಗ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ‘ಪ್ರಥ್ವಿ ಪರ್ವ’ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಕೊಡುಗೆ ಕೇವಲ ಆರ್ಥಿಕ ನೆರವಿನ ಮೂಲಕ ಮಾತ್ರ ಆಗಬೇಕೆಂದಿಲ್ಲ. ಪರಿಸರದ ರಕ್ಷಣೆ ಹಾಗೂ ಪರಿಸರ ಸ್ನೇಹಿ […]