ರಾಮ ಜನ್ಮಭೂಮಿ ಚಳುವಳಿಗಾಗಿ ಸರ್ವಸ್ವ ತ್ಯಾಗ ಮಾಡಿದ ಮಹನೀಯರಿಗೆ ಕೋಟಿ ನಮನ: ಪ್ರಧಾನಿ ಮೋದಿ
ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀ ರಾಮಂದಿರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮ ಜನ್ಮಭೂಮಿ ಚಳುವಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು. ವಿಶ್ವದಾದ್ಯಂತ ಇಂದು ಶ್ರೀರಾಮನ ಘೋಷವಾಕ್ಯ ಕೇಳಿಬರುತ್ತಿದೆ. ಸರಯೂ ನದಿಯಲ್ಲಿ ತೀರದಲ್ಲಿ ಸುವರ್ಣ ಅಧ್ಯಾಯ ಆರಂಭವಾಗಿದೆ. ಭಾರತ ಇಂದು ದೇವರ ಸನ್ನಿಧಿಯಲ್ಲಿದೆ ಎಂದರು. ತಮ್ಮ ಭಾಷಣದುದ್ದಕ್ಕೂ ಪ್ರಭು ಶ್ರೀರಾಮನ ಸಂದೇಶಗಳನ್ನು ಸಂಸ್ಕೃತದಲ್ಲಿ ಪಠಿಸಿದ ಪ್ರಧಾನಿ ಮೋದಿ, ಅಯೋಧ್ಯೆಯ ರಾಮಜನ್ಮಭೂಮಿ ಇವತ್ತು ಮುಕ್ತವಾಗಿದೆ. ಇಡೀ ದೇಶವೇ ಇಂದು ರೋಮಾಂಚನ ಗೊಂಡಿದೆ. ರಾಮಮಂದಿರ […]