ಎಸ್ಪಿ ನಿಶಾ ಜೇಮ್ಸ್ ವರ್ಗಾವಣೆ ಸಹಜ ‌ಪ್ರಕ್ರಿಯೆ, ನಮ್ಮ ಹಸ್ತಕ್ಷೇಪವಿಲ್ಲ: ರಘುಪತಿ ಭಟ್

ಉಡುಪಿ: ಜಿಲ್ಲೆಯ ಎಸ್ಪಿಯಾಗಿದ್ದ ನಿಶಾ ಜೇಮ್ಸ್‌ ಅವರ ವರ್ಗಾವಣೆ ಸರ್ಕಾರದ ಸಹಜ ಪ್ರಕ್ರಿಯೆ. ಇದು ಮುಖ್ಯಮಂತ್ರಿ ನಿರ್ಧಾರದಂತೆ ನಡೆದಿರುವ ವರ್ಗಾವಣೆ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಉಡುಪಿ ಶಾಸಕ ಕೆ. ರಘಪತಿ ಭಟ್‌ ಸ್ಪಷ್ಟಪಡಿಸಿದರು. ಎಸ್ಪಿ ನಿಶಾ ಜೇಮ್ಸ್‌ ವರ್ಗಾವಣೆಯಲ್ಲಿ ಉಡುಪಿ ಶಾಸಕರ ಕೈವಾಡವಿದೆ ಎಂಬ ಆರೋಪಗಳು ಕೇಳಿಬರುತ್ತಿದೆ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು. ಉಡುಪಿಯಲ್ಲಿ ಪರ್ಯಾಯ ಕೂಡ ಸಮೀಪಿಸುತ್ತಿದೆ. ಈ ಹಂತದಲ್ಲಿ ಜಿಲ್ಲೆಯ ಬಗ್ಗೆ ತಿಳಿದುಕೊಂಡಿರುವ ಅಧಿಕಾರಿ ಬಂದರೆ ಕಾನೂನು ಸುವ್ಯವಸ್ಥೆಯನ್ನು […]