ತರಕಾರಿ ಬೀಜಗಳ ಮಿನಿಕಿಟ್ ವಿತರಣೆ

ಉಡುಪಿ, ಮೇ 28: ಉಡುಪಿ ತಾಲೂಕಿನ ರೈತರಿಗೆ ತರಕಾರಿ ಬೆಳೆಗಳ ಪ್ರೋತ್ಸಾಹಕ್ಕಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಕೃಷಿಭಾಗ್ಯ ಯೋಜನೆಯಡಿಯಲ್ಲಿ ತರಕಾರಿ ಬೀಜಗಳ ಮಿನಿಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಡೆ, ಬೀನ್ಸ್, ಮುಳ್ಳು ಸೌತೆ, ಸೋರೆ ಕಾಯಿ ಹಾಗೂ ಹೀರೆ ಕಾಯಿಯನ್ನೊಳಗೊಂಡ ತರಕಾರಿ ಬೀಜಗಳ ಮಿನಿಕಿಟ್‍ನ್ನು ವಿತರಿಸಲಾಗುವುದು. ಆಸಕ್ತ ರೈತರು ಪಹಣಿ/ ಆರ್.ಟಿ.ಸಿ ಯ ಪ್ರತಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಪಡಿತರ ಚೀಟಿಯ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ […]