ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪು ಮಧುರ: ಸುನಿಧಿ ಹೆಬ್ಬಾರ್ ಬರೆದ ಬರಹ..

ಸ್ವಾತಂತ್ರ್ಯ ಎಂಬ ಉತ್ಸವದ ನೆನಪಿನ ಅಂಗಳದಲ್ಲಿ ಯಾವುದೇ ಹಬ್ಬವಾಗಲಿ, ಹಬ್ಬದ ದಿನ ನಾವು ಖುಷಿಯಾಗಿರುವುದು ಒಂದು ಲೆಕ್ಕವಾದರೆ ಆ ಹಬ್ಬದ ತಯಾರಿ ನೂರು ಪಟ್ಟು ಸಂತೋಷಕಾರಿಯಾದದ್ದು. ಅದೂ ಗೆಳೆಯರೊಂದಿಗೆ ಸೇರಿ, ಕೆಲಸವನ್ನೆಲ್ಲ ಹಂಚಿಕೊಂಡು, ಒಮ್ಮೆ ನಗುತ್ತಾ ಒಮ್ಮೆ ಕಚ್ಚಾಡುತ್ತ, ನಲಿಯುತ್ತ ಆಚರಿಸುತ್ತಿದ್ದದ್ದು ನಮ್ಮ ರಾಷ್ಟ್ರೀಯ ಹಬ್ಬಗಳು. ಅಗಸ್ಟ್ ತಿಂಗಳ ಜಿಟಿ ಜಿಟಿ ಮಳೆಯಲ್ಲಿ ಬಟ್ಟೆಯನೆಲ್ಲ ಒದ್ದೆಮಾಡಿಕೊಂಡು ಉತ್ಸಾಹದಿಂದ ನಾವೆಲ್ಲ ಸೇರುತ್ತಿದದ್ದು ಸ್ವಾತಂತ್ರ್ಯೋತ್ಸವಕ್ಕೆ. ನಾನು ನನ್ನ ನೆನಪಿನ ಪುಟವನ್ನು ತಿರುವು ಹಾಕಿ ಹೋಗಬಯಸುವುದು ಮರಳಿ ನನ್ನ ಹೈ ಸ್ಕೂಲ್ […]