ಜು.6 : ಮುನಿಯಾಲು ಆಯುರ್ವೇದ ಸಂಸ್ಥೆಯಿಂದ ಉಚಿತ ಔಷಧೀಯ ಸಸ್ಯಗಳ ವಿತರಣೆ
ಮಣಿಪಾಲ:ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಆಸಕ್ತ ಸಾರ್ವಜನಿಕರಿಗೆ ವಿವಿಧ ಜಾತಿಯ ರೋಗ ನಿರೋಧಕ ಔಷಧೀಯ ಸಸ್ಯಗಳನ್ನು ವಿತರಿಸುವ ಕಾರ್ಯಕ್ರಮ ಜು.6 ರಂದು ನಡೆಯಲಿದೆ ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಿಸಲಾಗುತ್ತದೆ. ಅಂದು ಮುಂಜಾನೆ 9 ಗಂಟೆಯಿಂದ ಸಂಜೆ 4ರ ತನಕ ಉಚಿತವಾಗಿ ಪೇರಳೆ,ಬಿಲ್ವಪತ್ರೆ, ಕಹಿಬೇವು, ನೆಲ್ಲಿ, ಕಾಡು ಬಾದಾಮಿ, ಪುನರ್ಪುಳಿ, ಹೊಂಗೆ, ನೇರಳೆ, ತಾರೆಕಾಯಿ, ನೊರೆಕಾಯಿ, ಹಾಗೂ ಬಳ್ಳಿ ಮತ್ತು ಗಿಡಗಳಾದ ಹಿಪ್ಪಲಿ, ಅಮೃತ ಬಳ್ಳಿ, ಸಂಧಿಬೀಳು, […]