‘ಮೀಡಿಯಾ ಮಂಥನ್’ ಮಾಧ್ಯಮೋತ್ಸವದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಾಂಪಿಯನ್ಸ್
ಮೂಡಬಿದ್ರೆ:ಸೈಂಟ್‌ಅಲೋಷಿಯಸ್ ಕಾಲೇಜು ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ‘ಮೀಡಿಯಾ ಮಂಥನ್’ ಮಾಧ್ಯಮೋತ್ಸವದಲ್ಲಿ ಸತತವಾಗಿ ಮೂರನೇ ಬಾರಿ ಆಳ್ವಾಸ್ ವಿದ್ಯಾರ್ಥಿಗಳ ತಂಡ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ವರದಿಗಾರಿಕೆಯಲ್ಲಿ ದುರ್ಗಾಪ್ರಸನ್ನಾ ಪ್ರಥಮ, ಆರ್.ಜೆ ಸ್ಪರ್ಧೆಯಲ್ಲಿ ದಿಶಾ ಶೆಟ್ಟಿ ದ್ವಿತೀಯ, ಪಿ ಟು ಸಿಯಲ್ಲಿ ಚೈತ್ರಾ ಪ್ರಥಮ, ನೃತ್ಯದಲ್ಲಿ ವೀಕ್ಷಿತಾ ಶೆಟ್ಟಿ ಮತ್ತು ತಂಡ ಪ್ರಥಮ, ಫೊಟೋಗ್ರಾಫಿಯಲ್ಲಿ ಶರದ್‌ಆಚಾರ್ ದ್ವಿತೀಯ, ಮೇಕಿಂಗ್ ಎ ಪ್ರೊಡಕ್ಟ್ ಶ್ರೀಲಕ್ಷ್ಮಿ ಘಾಟೆ ಮತ್ತು ತಂಡ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಪಡೆದುಕೊಂಡರು.