ಮೇ. 21 ರಂದು ಕೋಡಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ
ಉಡುಪಿ: ಜಿ20 ಮೆಗಾ ಬೀಚ್ ಕ್ಲೀನ್ ಅಭಿಯಾನದಡಿ ಜಿಲ್ಲೆಯ ಕುಂದಾಪುರ ಕೋಡಿ ಬೀಚ್ನಲ್ಲಿ ಸ್ವಚ್ಛ ಬೀಚ್ಗಳು ಮತ್ತು ಮಾಲಿನ್ಯ ಮುಕ್ತ ಸಾಗರಗಳ ಪ್ರಾಮುಖ್ಯತೆ ಬಗ್ಗೆ ಸ್ಥಳೀಯ ಸಮುದಾಯಗಳನ್ನು ಸಂವೇದನಾಶೀಲಗೊಳಿಸಲು ಮೇ 21 ರಂದು ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಸಾಮೂಹಿಕ ಬೀಚ್ ಸ್ವಚ್ಛತಾ ಅಭಿಯಾನ ಆಯೋಜಿಸಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರು (ಪರಿಸರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.