ಮದುವೆಯಲ್ಲಿ ಕೊರೊನಾ ಜಾಗೃತಿ: ‘ಕೊರೊನಾ ವಿರುದ್ಧ ಜಯಿಸಲು 20 ಸೂತ್ರಗಳು’ ಕೈಪಿಡಿ ಅನಾವರಣ
ಕುಂದಾಪುರ: ಕೊರೋನಾ ಜಾಗತಿಕ ಮಹಾಮಾರಿಯಾಗಿ ಪರಿಣಮಿಸಿರುವ ಈ ಕಾಲಘಟ್ಟದಲ್ಲಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸಗಳು ಮನೆಮನೆಯಲ್ಲಿಯೂ ಆಗಬೇಕಿದೆ. ಆ ಹಿನ್ನೆಲೆಯಲ್ಲಿ ಬೈಂದೂರು ತಾಲೂಕು ಸೇನಾಪುರ ಗ್ರಾಮದ ಒಳಬೈಲು ಎಂಬಲ್ಲಿ ಜೂ.14ರಂದು ನಡೆದ ಸರಳ ಮದುವೆಯ ಸಡಗರದ ನಡುವೆಯೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ‘ಕೊರೋನಾ ವಿರುದ್ಧ ಜಯಿಸಲು 20 ಸೂತ್ರಗಳು’ ಎನ್ನುವ ಕೈಪಿಡಿಯನ್ನು ಬಿಡುಗಡೆಗೊಳಿಸಿ ನೆರೆದವರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಸೇನಾಪುರ ಗ್ರಾಮ ಒಳಬೈಲು ಶ್ರೀಮತಿ ಶಾರದಾ ಮತ್ತು ಗೋಪಾಲ ಇವರ ಪುತ್ರ ರಾಜಗುರು ಪಡುಕೋಣೆ […]