ಮರವಂತೆಯಲ್ಲಿ ರಂಗೇರಿದ ಜನಸಾಗರ: ಕಡಲ ಸ್ನಾನ ಮಾಡಿದ್ರು,ದೇವರ ದರ್ಶನ ಪಡೆದ್ರು

ಕುಂದಾಪುರ: ನದಿ-ಕಡಲು ನಡುವಿನ ಅಪೂರ್ವ ಮರವಂತೆಯ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಅಂಗವಾಗಿ ಗುರುವಾರ ಜನಜಾತ್ರೆ ಮೇಳೈಸಿತು. ಬೆಳಗ್ಗಿನ ಜಾವ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಸಮುದ್ರ ಹಾಗೂ ನದಿಯಲ್ಲಿ ಸ್ನಾನ ಮಾಡಿದ ಬಳಿಕ ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ದೇವಸ್ಥಾನ ಪ್ರವೇಶಿಸಲು ಕಾದಿದ್ದವರ ಸರತಿಯ ಸಾಲು ಬಹುದೂರದವರೆಗೂ ವ್ಯಾಪಿಸಿತು. ನವವಿವಾಹಿತ ಜೋಡಿಗಳು, ಕೃಷಿಕರು, ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು. ಮರವಂತೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಮಚಂದ್ರ […]