ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತ್ಯು.

ಮಂಜೇಶ್ವರ: ಮಂಜೇಶ್ವರ ಸಮೀಪದ ಕಡಂಬಾರ್ ಎಂಬಲ್ಲಿ ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಡಂಬಾರ್ ನ ಹ್ಯಾರಿಸ್ ಹಾಗೂ ಕೈರುನ್ನಿಸ ದಂಪತಿ ಯವರ ಒಂದು ವರ್ಷದ ಫಾತಿಮಾ ಎಂಬ ಮಗು ಮನೆಯಲ್ಲಿ ಆಟ ಆಡುತ್ತಾ ಬಾತ್ ರೂಮ್ ಒಳ ಬಂದು ಅಲ್ಲಿ ನೀರು ತುಂಬಿದ ಬಕೆಟ್ ಗೆ ತಲೆ ಹಾಕಿದ ಪರಿಣಾಮ ಉಸಿರುಕಟ್ಟಿ ಮೃತಪಟ್ಟಿರುತ್ತದೆ ಎನ್ನೆಲಾಗಿದೆ.