ಮಣಿಪಾಲ: ಮೇ 5ರಿಂದ ಗಾಂಧಿಯನ್ ಸೆಂಟರ್‌ನಲ್ಲಿ ಉಡುಪಿ ಸೀರೆಗಳ ಕುರಿತ ಕಾರ್ಯಾಗಾರ ‘ನೇಯ್ಗೆ’

ಉಡುಪಿ: ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಆಶ್ರಯದಲ್ಲಿ ಉಡುಪಿ ಸೀರೆಗಳ ಕುರಿತು ಎರಡು ದಿನಗಳ ಪ್ರದರ್ಶನ, ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನಗಳ ಕಾರ್ಯಾಗಾರ ‘ನೇಯ್ಗೆ’ ಮೇ 5 ಮತ್ತು 6ರಂದು ಮಣಿಪಾಲದಲ್ಲಿ ನಡೆಯಲಿದೆ. ಈ ಕಾರ್ಯಾಗಾರ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ಸ್‌ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋ ಆರಂಭಿಸಿದ ‘ಗಾಂಧಿ-ಕಿಂಗ್ ಎಕ್ಸೆಚೇಂಜ್’ ಕಾರ್ಯಕ್ರಮದ ಭಾಗವಾಗಿ ನಡೆಯಲಿದೆ ಎಂದು ಕಾರ್ಯಾ ಗಾರದ ಸಂಘಟಕರಲ್ಲೊಬ್ಬರಾದ ಲಾವಣ್ಯ ಎನ್.ಕೆ. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಡುಪಿ ಸೀರೆ ಮತ್ತು […]