ಮಣಿಪಾಲ: ಗಾಯಗೊಂಡ ಹೋರಿ ರಸ್ತೆಯಲ್ಲೇ ಒದ್ದಾಡುತ್ತಿದೆ! ನಗರಸಭೆ, ಪಶು ವೈದ್ಯಾಧಿಕಾರಿಗಳು ಇತ್ತ ಗಮನಹರಿಸಲಿ
ಮಣಿಪಾಲ: ಮಣಿಪಾಲದ ದಶರಥ ನಗರ ರಸ್ತೆ ಯ ಬಳಿ ಹೋರಿಯೊಂದು ದಯನೀಯ ಸ್ಥಿತಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದು ಸಾರ್ವಜನಿಕರ ನಿದ್ದೆಗೆಡಿಸಿದೆ.ಸರಿಸುಮಾರು ಹತ್ತು ವರ್ಷದ ಹೋರಿಗೆ ತನ್ನ ತಲೆಯ ಮೇಲಿನ ಕೊಂಬಿನ ಭಾಗದಲ್ಲಿ ಗಾಯಗೊಂಡ ಪರಿಣಾಮ ತೀವ್ರವಾಗಿ ರಕ್ತಸ್ರಾವವಾಗುತಿದೆ. ಗಾಯದ ಸಮೀಪ ಹುಳಗಳು ಕಾಣಿಸಿಕೊಂಡು ತೀವ್ರ ಸ್ವರೂಪ ಪಡೆದು ಉಲ್ಬಣಗೊಳ್ಳ ತ್ತಿದೆ. ಹೋರಿಯ ಪಾಡು ನೋಡಲಾಗದೇ ಸ್ಥಳಿಯರು ಚಿಕಿತ್ಸೆಗೆ ಪ್ರಯತ್ನ ಪಟ್ಟರು ಕೈಗೆ ಸಿಗದೆ ಓಡಾಡುತ್ತಿದೆ.ಇದರಿಂದ ಸ್ಥಳೀಯರು ಅಸಹಾಯಕರಾಗಿದ್ದಾರೆ. ಮಳೆಯ ಕಾರಣ ಗಾಯವು ಮತ್ತಷ್ಟು ಉಲ್ಬಣಗೊಳ್ಳಬಹುದೆಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ. […]