ಎಂಐಟಿ ವತಿಯಿಂದ ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಉಚಿತ 3D ಅನಿಮೇಷನ್ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಧ್ಯಮ ತಂತ್ರಜ್ಞಾನ ವಿಭಾಗ 6 ದಿನಗಳ ಉಚಿತ 3D ಅನಿಮೇಷನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 3D ಬಗ್ಗೆ ಕಲ್ಪನೆಯನ್ನು ಪಡೆಯಲು ಅನುಕೂಲವಾಗುವಂತೆ 3D ಅನಿಮೇಷನ್ ಕಾರ್ಯಾಗಾರವನ್ನು ಏರ್ಪಡಿಸಿದೆ. ಕಾರ್ಯಾಗಾರವು ಒಳಗೊಂಡಿರುವ ಪ್ರಮುಖ ವಿಷಯಗಳು: ಮಾಡೆಲಿಂಗ್ ಅನ್ನು ಒಳಗೊಂಡಿರುವ 3D ಅನಿಮೇಷನ್, ಟೆಕ್ಸ್ಚರಿಂಗ್, ಲೈಟಿಂಗ್ ಮತ್ತು ರಿಗ್ಗಿಂಗ್. 30 ವಿದ್ಯಾರ್ಥಿಗಳ ಗರಿಷ್ಠ ಸಾಮರ್ಥ್ಯವಾಗಿರುವುದರಿಂದ, ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಗೂಗಲ್ ಫಾರ್ಮ್‌ನಲ್ಲಿ ನೋಂದಣಿಗೆ ಕೊನೆಯ ದಿನಾಂಕ […]

ಮಣಿಪಾಲ: ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಮಣಿಪಾಲ: ಶಿವಳ್ಳಿ ಗ್ರಾಮದ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಸೆನ್ ಮತ್ತು ಪಿಐ ಪೊಲೀಸ್ ತಂಡವು ಎ.2 ರಂದು ಬಂಧಿಸಿದ್ದಾರೆ. ಬಂಧಿತನಿಂದ 2.110 ಕೆಜಿ ಗಾಂಜಾ ಹಾಗೂ 1 ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.

ಕೌಶಲ್ಯ ಭಾರತ ಕೇಂದ್ರ ಹಾಗೂ Rooman Technolgies ವತಿಯಿಂದ ಉಚಿತ ತರಬೇತಿ ಹಾಗೂ ಉದ್ಯೋಗಾವಕಾಶ

ಮಣಿಪಾಲ: ಕೌಶಲ್ಯ ಭಾರತ ಕೇಂದ್ರ ಹಾಗೂ Rooman Technolgies ಮಣಿಪಾಲ ವತಿಯಿಂದ ಉಚಿತ ತರಬೇತಿ ಜೊತೆಗೆ ಉದ್ಯೋಗಾವಕಾಶ ತರಬೇತಿ ಕೇಂದ್ರವು ಹವಾನಿಯಂತ್ರಿತವಾಗಿದ್ದು ಜಾಗತಿಕ ದರ್ಜೆಯಲ್ಲಿ ರೂಪುಗೊಂಡಿದೆ. ಲಭ್ಯವಿರುವ ತರಬೇತಿಗಳು 1.ಸಾಫ್ಟ್ ವೇರ್ ಡೆವೆಲಪ್ ಮೆಂಟ್ 2.ಎಫ್ ಟಿ ಸಿ ಪಿ (ಫೀಲ್ಡ್ ಟೆಕ್ನೀಶಿಯನ್ ಕಂಪ್ಯೂಟರ್ ಫೆರಿಫೆರಲ್) 3.ಡೊಮೆಸ್ಟಿಕ್ ಐಟಿಹೆಲ್ಪ್ ಡೆಸ್ಕ್ ಅಟೆಂಡೆಂಟ್ 4.ಟೈಲರಿಂಗ್ ಕೋರ್ಸ್ ತರಬೇತಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9513222512/ 8904195713. ತರಗತಿಗಳು ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿವೆ.

ಕಿಡ್ ಝೀ ಸಮ್ಮರ್ ಫೆಸ್ಟ್: ರಜಾದಿನಗಳನ್ನು ಸೃಜನಾತ್ಮಕವಾಗಿ ಕಳೆಯುವ ಅವಕಾಶ

ಮಣಿಪಾಲ: ಪ್ರಿ-ಸ್ಕೂಲ್ ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿರುವ ಕಿಡ್ ಝೀ ಸಂಸ್ಥೆಯು ಮಕ್ಕಳಿಗಾಗಿ ಸಮ್ಮರ್ ಫೆಸ್ಟ್ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಮಕ್ಕಳು ರಜಾದಿನಗಳನ್ನು ಸೃಜನಾತ್ಮಕವಾಗಿ ಕಳೆಯಬಹುದು. ಈ ಚಟುವಟಿಕೆಗಳು, ಕಥೆ ಹೇಳುವಿಕೆ, ನೃತ್ಯ, ಸಂಗೀತ, ಆಟಗಳು, ಯೋಗಾ ಮತ್ತು ಝುಂಬಾ, ಚಿತ್ರಕಲೆ ಮುಂತಾದವುಗಳನ್ನು ಒಳಗೊಂಡಿದೆ. ಸಮ್ಮರ್ ಫೆಸ್ಟ್ ಎಪ್ರಿಲ್ 3 ರಿಂದ ಪ್ರಾರಂಭವಾಗಲಿದ್ದು, 2 ರಿಂದ 9 ವರ್ಷ ವಯಸ್ಸಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಸಮ್ಮರ್ ಫೆಸ್ಟ್ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ1 ಗಂಟೆ ಹಾಗೂ ಬೆಳಿಗ್ಗೆ 9 ಗಂಟೆಯಿಂದ […]

ಭಾವನೆಗಳ ಅಭಿವ್ಯಕ್ತಿಗೆ ಮಾತೃಭಾಷೆ ಸೂಕ್ತ: ಪ್ರೊ. ಪಿ. ಗಿರಿಧರ ಕಿಣಿ

ಮಣಿಪಾಲ: ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆಯಂಥ ಸೂಕ್ತ ಮಾಧ್ಯಮ ಮತ್ತೊಂದಿಲ್ಲ. ಪ್ರಸ್ತುತ ಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲೆಯ ಬೋಧನಾ ವಿಧಾನಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಬಹುಭಾಷೆಯಲ್ಲಿ ಶಿಕ್ಷಣ ಒದಗಿಸುವ ಧ್ಯೇಯದೊಂದಿಗೆ ಆಚರಿಸುವ ಸಂಕಲ್ಪವನ್ನು ಯುನೆಸ್ಕೋ ಹೊಂದಿದೆ. ಈ ದಿನದಂದು ಸಾಹಿತ್ಯ- ಕಲೆಗಳಿಗೆ ಸಂಬಂಧಿಸಿದ ಅಂತರ್‌ಶಿಸ್ತೀಯ ಮಹತ್ತ್ವದ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿರುವುದು ಅರ್ಥಪೂರ್ಣ ಎಂದು ಮಣಿಪಾಲ್‌ ಅಕಾಡೆಮಿ ಹೈಯರ್ ಎಜುಕೇಶನ್‌ನ ರಿಜಿಸ್ಟ್ರಾರ್‌ ಪ್ರೊ. ಪಿ. ಗಿರಿಧರ ಕಿಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಹೆಯ […]