ವಿಶ್ವ ಥಲಸ್ಸೆಮಿಯಾ ದಿನದ ಅಂಗವಾಗಿ ಕೆ.ಎಂಸಿಯಲ್ಲಿ ಎಚ್ಎಲ್ಎ ಪರೀಕ್ಷಾ ಶಿಬಿರ

ಮಣಿಪಾಲ: ಜಾಗತಿಕವಾಗಿ ಥಲಸ್ಸೆಮಿಯಾ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಮತ್ತು ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ತಮ್ಮ ಆರೈಕೆದಾರರಿಗೆ ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ‘”ಎಚ್ಚರಿಕೆಯಿಂದಿರಿ, ಹಂಚಿಕೊಳ್ಳಿ ಕಾಳಜಿ: ಥಲಸ್ಸೆಮಿಯಾ ಕುರಿತು ಆರೈಕೆಯ ಅಂತರವನ್ನು ತಗ್ಗಿಸಲು ಶಿಕ್ಷಣವನ್ನು ಬಲಪಡಿಸುವುದು”. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗವು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಡಿಕೆಎಂಎಸ್ ಸಹಕಾರದೊಂದಿಗೆ ಎಚ್‌ಎಲ್‌ಎ ಪರೀಕ್ಷಾ ಶಿಬಿರವನ್ನು ನಡೆಸಿತು. ಶಿಬಿರದಲ್ಲಿ ರೋಗಿಗಳು ಮತ್ತು ಸಂಭಾವ್ಯ […]
ಎಂಐಟಿ ಅಕಾಡೆಮಿಕ್ಸ್ ವಿಭಾಗದ ಶ್ರೀಮತಿ ಮನೋರಮಾ ಅವರಿಗೆ ಬೀಳ್ಕೊಡುಗೆ

ಮಣಿಪಾಲ: ಎಂಐಟಿಯಲ್ಲಿ 35 ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಇದೀಗ ಅಕಾಡೆಮಿಕ್ಸ್ ವಿಭಾಗದಿಂದ ನಿವೃತ್ತಿ ಹೊಂದಿದ್ದ ಸಿಬ್ಬಂದಿ ಶ್ರೀಮತಿ ಮನೋರಮಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಂಸ್ಥೆಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ, ಜಂಟಿ ನಿರ್ದೇಶಕ ಡಾ. ಸೋಮಶೇಖರ್ ಭಟ್, ಸಹ ನಿರ್ದೇಶಕ( ಅಕಾಡೆಮಿಕ್ಸ್) ಡಾ. ರವಿರಾಜ್ ಅಧಿಕಾರಿ, ಅಕಾಡೆಮಿಕ್ಸ್ ವಿಭಾಗದ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಲೆ ವಿಶ್ವ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ: ಮೆರ್ಲಿ ಬರ್ಲಾನ್

ಮಣಿಪಾಲ: ಕಲೆ ವಿಶ್ವದಾದ್ಯಂತ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವ ಶಾಂತಿಯ ಅಂತರರಾಷ್ಟ್ರೀಯ ಮಹಿಳಾ ಒಕ್ಕೂಟ (WFWPI) ಯುಎನ್ ಸಂಬಂಧಗಳ (ನ್ಯೂಯಾರ್ಕ್) ನಿರ್ದೇಶಕಿ ಮೆರ್ಲಿ ಬರ್ಲಾನ್ ಹೇಳಿದರು. ಅವರು ವಿಶ್ವ ಶಾಂತಿಯ ಅನ್ವೇಷಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ ಮಣಿಪಾಲದ ವಿಶೇಷಚೇತನ ಮಕ್ಕಳ ವಿಶೇಷ ಮನೆಯಾದ ‘ಆಸರೆ’ಯನ್ನು ಬೆಂಬಲಿಸುವ ಸಾಂಸ್ಕೃತಿಕ ಸಂಜೆ ‘ಆರ್ಟ್ ಫಾರ್ ಪೀಸ್’ […]
ಮೇ 22 ರಂದು ವಿಹಿಂಪ ವತಿಯಿಂದ ಐನಾಕ್ಸ್ ಚಿತ್ರಮಂದಿರದಲ್ಲಿ ಯುವತಿಯರಿಗಾಗಿ ‘ದಿ ಕೇರಳ ಸ್ಟೋರಿ’ ಉಚಿತ ಪ್ರದರ್ಶನ

ಮಣಿಪಾಲ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೆರ್ಡೂರು ಇವರ ವತಿಯಿಂದ ದಿ ಕೇರಳ ಸ್ಟೋರಿ ಸಿನೆಮಾದ ಉಚಿತ ಪ್ರದರ್ಶನವನ್ನು 18 ವರ್ಷ ಮೇಲ್ಪಟ್ಟ ಹಿಂದೂ ಸಹೋದರಿಯರಿಗೆ, ಮೇ 22 ಸೋಮವಾರ ಬೆಳಿಗ್ಗೆ 10.15 ಕ್ಕೆ ಮಣಿಪಾಲ ಪಿ.ವಿ.ಆರ್.ಐನಾಕ್ಸ್ (PVR INOX) ಥಿಯೇಟರ್ ನಲ್ಲಿ ನಿಗದಿಪಡಿಸಲಾಗಿದೆ. ಆಸಕ್ತರು ಮೇ 21 ಭಾನುವಾರದ ಒಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೆರ್ಡೂರು 9916810202/ 9535057073/ 9972968651
ಜ್ಞಾನಸುಧಾ ಕಾಲೇಜಿನಲ್ಲಿ ನೀಟ್ ಲಾಂಗ್ ಟರ್ಮ್ ನೋಂದಣಿ ಆರಂಭ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ

ಮಣಿಪಾಲ: 2024ರ ನೀಟ್ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಜ್ಞಾನಸುಧಾ ಮಣಿಪಾಲದಲ್ಲಿ ಅನುಭವಿ ಉಪನ್ಯಾಸಕರಿಂದ ತರಬೇತಿ ನೀಡಲಾಗುವುದು. ಕಳೆದ ಎರಡು ವರ್ಷಗಳಲ್ಲಿ 186 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಮೂಲಕ ಎಂ.ಬಿ.ಬಿ.ಎಸ್ ಗೆ ಸೇರಿರುವುದು ಗಮನಾರ್ಹವಾಗಿದೆ. ಪ್ರಸಕ್ತ ಸಾಲಿನ ತರಬೇತಿಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ. 8762280555/ 8762095555