ಮಣಿಪಾಲ: ವಿಶ್ವ ಆರೋಗ್ಯ ದಿನ ನಿಮಿತ್ತ ಆರೋಗ್ಯ ಜಾಗೃತಿ ಅರಿವಿಗಾಗಿ ಶಿಲ್ಪ ಅನಾವರಣ

ಮಣಿಪಾಲ: ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನಾಗಿ ವಿಶ್ವದ್ಯಾಂತ ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಉತ್ತಮ ಆರೋಗ್ಯದ ಕುರಿತು ಅರಿವು ಮೂಡಿಸುವುದಾಗಿದೆ. ಮೊದಲು ಸೋಂಕು ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇತ್ತು. ಆದರೀಗ ಅಸಾಂಕ್ರಾಮಿಕ ಮತ್ತು ಜೀವನ ಶೈಲಿಯಿಂದ ಬರುವ ಕಾಯಿಲೆಗಳು, ಮಧುಮೇಹ, ಹೃದ್ರೋಗ, ಕಿಡ್ನಿ ಇತ್ಯಾದಿಗಳ ತಡೆಗಟ್ಟುವ ಮಾಹಿತಿ ಮತ್ತು ಅರಿವು ಮೂಡಿಸುವ ಅವಶ್ಯಕತೆ ಇದೆ. ಇಂತಹ ಕಾರ್ಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು […]
ಮಾಹೆ ಗಾಂಧಿಯನ್ ಸೆಂಟರಿನಲ್ಲಿ ಪಟ್ಟಚಿತ್ರ ಕಾರ್ಯಾಗಾರ

ಮಣಿಪಾಲ: ಸಮಾಜವು ಕಲೆ ಮತ್ತು ಕಲಾವಿದರನ್ನು ಬೆಂಬಲಿಸಿದರೆ ಮಾತ್ರ ಕಲೆ ಉಳಿಯುತ್ತದೆ. ಉತ್ತಮ ಕಲೆಯ ರಚನೆಗೆ ಕಲಾಕಾರರ ಸಂಪೂರ್ಣ ಸಮರ್ಪಣೆ ಬೇಕು ಮತ್ತು ಅದರಲ್ಲಿ ಸಂತೋಷವೂ ಅಡಕವಾಗಿದೆ ಎಂದು ಒಡಿಶಾದ ಪಟ್ಟಚಿತ್ರ ಕಲಾವಿದೆ ಗೀತಾಂಜಲಿ ದಾಸ್ ಹೇಳಿದರು. ಪಟ್ಟಚಿತ್ರ ಕಾರ್ಯಾಗಾರವನ್ನು ನಡೆಸಲು ಉಡುಪಿಗೆ ಆಗಮಿಸಿದ್ದ ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದರು. ಗೀತಾಂಜಲಿ ದಾಸ್ ಅವರು ಪಟ್ಟಚಿತ್ರ ಕಲಾ ಪ್ರಕಾರದ ವಿಶೇಷತೆಗಳು, ಅದಕ್ಕೆ ಬಳಸುವ ಮೂಲ […]
ಎಂಐಟಿ ವತಿಯಿಂದ ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಉಚಿತ 3D ಅನಿಮೇಷನ್ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಧ್ಯಮ ತಂತ್ರಜ್ಞಾನ ವಿಭಾಗ 6 ದಿನಗಳ ಉಚಿತ 3D ಅನಿಮೇಷನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹೈಸ್ಕೂಲ್ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 3D ಬಗ್ಗೆ ಕಲ್ಪನೆಯನ್ನು ಪಡೆಯಲು ಅನುಕೂಲವಾಗುವಂತೆ 3D ಅನಿಮೇಷನ್ ಕಾರ್ಯಾಗಾರವನ್ನು ಏರ್ಪಡಿಸಿದೆ. ಕಾರ್ಯಾಗಾರವು ಒಳಗೊಂಡಿರುವ ಪ್ರಮುಖ ವಿಷಯಗಳು: ಮಾಡೆಲಿಂಗ್ ಅನ್ನು ಒಳಗೊಂಡಿರುವ 3D ಅನಿಮೇಷನ್, ಟೆಕ್ಸ್ಚರಿಂಗ್, ಲೈಟಿಂಗ್ ಮತ್ತು ರಿಗ್ಗಿಂಗ್. 30 ವಿದ್ಯಾರ್ಥಿಗಳ ಗರಿಷ್ಠ ಸಾಮರ್ಥ್ಯವಾಗಿರುವುದರಿಂದ, ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಗೂಗಲ್ ಫಾರ್ಮ್‌ನಲ್ಲಿ ನೋಂದಣಿಗೆ ಕೊನೆಯ ದಿನಾಂಕ […]
ಮಣಿಪಾಲ: ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಮಣಿಪಾಲ: ಶಿವಳ್ಳಿ ಗ್ರಾಮದ ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಸೆನ್ ಮತ್ತು ಪಿಐ ಪೊಲೀಸ್ ತಂಡವು ಎ.2 ರಂದು ಬಂಧಿಸಿದ್ದಾರೆ. ಬಂಧಿತನಿಂದ 2.110 ಕೆಜಿ ಗಾಂಜಾ ಹಾಗೂ 1 ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.
ಕೌಶಲ್ಯ ಭಾರತ ಕೇಂದ್ರ ಹಾಗೂ Rooman Technolgies ವತಿಯಿಂದ ಉಚಿತ ತರಬೇತಿ ಹಾಗೂ ಉದ್ಯೋಗಾವಕಾಶ

ಮಣಿಪಾಲ: ಕೌಶಲ್ಯ ಭಾರತ ಕೇಂದ್ರ ಹಾಗೂ Rooman Technolgies ಮಣಿಪಾಲ ವತಿಯಿಂದ ಉಚಿತ ತರಬೇತಿ ಜೊತೆಗೆ ಉದ್ಯೋಗಾವಕಾಶ ತರಬೇತಿ ಕೇಂದ್ರವು ಹವಾನಿಯಂತ್ರಿತವಾಗಿದ್ದು ಜಾಗತಿಕ ದರ್ಜೆಯಲ್ಲಿ ರೂಪುಗೊಂಡಿದೆ. ಲಭ್ಯವಿರುವ ತರಬೇತಿಗಳು 1.ಸಾಫ್ಟ್ ವೇರ್ ಡೆವೆಲಪ್ ಮೆಂಟ್ 2.ಎಫ್ ಟಿ ಸಿ ಪಿ (ಫೀಲ್ಡ್ ಟೆಕ್ನೀಶಿಯನ್ ಕಂಪ್ಯೂಟರ್ ಫೆರಿಫೆರಲ್) 3.ಡೊಮೆಸ್ಟಿಕ್ ಐಟಿಹೆಲ್ಪ್ ಡೆಸ್ಕ್ ಅಟೆಂಡೆಂಟ್ 4.ಟೈಲರಿಂಗ್ ಕೋರ್ಸ್ ತರಬೇತಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9513222512/ 8904195713. ತರಗತಿಗಳು ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿವೆ.