ಮಣಿಪಾಲ: ವೈಶ್ಯವಾಣಿ ಸಮುದಾಯಕ್ಕೆ ಕೂಡಲೇ ಜಾತಿ ಪ್ರಮಾಣ ನೀಡುವಂತೆ ಆಗ್ರಹಿಸಿ ಧರಣಿ

ಉಡುಪಿ: ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರ್ಪಡೆಗೊಳಿಸಿದ ಸರಕಾರಿ ಆದೇಶದಂತೆ ಗಜೇಟ್ ನೋಟಿಫಿಕೇಶನ್ ಹೊರಡಿಸಿ ಜಾತಿ ಪ್ರಮಾಣ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ವೈಶ್ಯವಾಣಿ ಸಮಾಜ ಸಮುದಾಯದ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಿದರು. ನೂರಾರು ಸಂಖ್ಯೆ ಸೇರಿದ್ದ ವೈಶ್ಯವಾಣಿ ಸಮುದಾಯದವರು ಕೂಡಲೇ ಒಬಿಸಿ ಜಾತಿ ಪ್ರಮಾಣ ವಿತರಣೆ ಮಾಡಬೇಕು. ಸರಕಾರಿ ಆದೇಶದಂತೆ ವೈಶ್ಯವಾಣಿ ಸಮುದಾಯವನ್ನು ಒಬಿಸಿಗೆ ಸೇರ್ಪಡೆಗೊಳಿಸಿ ಎರಡು ವರ್ಷಗಳೇ ಕಳೆದಿದೆ. ಆದರೂ ನಮ್ಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ […]