ಮಣಿಪಾಲ: ಗಾಂಜಾ ಮಾರಾಟ – ಇಬ್ಬರು ವಿದ್ಯಾರ್ಥಿಗಳಿಂದ ಬಂಧನ

ಮಣಿಪಾಲ: ಇಲ್ಲಿನ ಎರಡು ವಸತಿಗೃಹಗಳಿಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿ ಸುಮಾರು 36 ಸಾವಿರ ರೂ. ಮೌಲ್ಯದ 727 ಗ್ರಾಂ ಗಾಂಜಾ ಹಾಗೂ 30 ಸಾವಿರ ರೂ. ಮೌಲ್ಯದ ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ. ಗುಜರಾತ್‌ ಮೂಲದ ಕುಶ್‌ಕೆಯುಶ್‌ ಪಟೇಲ್‌ (20) ಹಾಗೂ ಉತ್ತರ ಪ್ರದೇಶದ ದೇವಾಂಶ್‌ ತ್ಯಾಗಿ (22) ಬಂಧಿತರು. ಆರೋಪಿಗಳು ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಶೇಖರಿಸಿ ಇಟ್ಟಿದ್ದರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.