ಮಣಿಪಾಲ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿ, ನೇಣುಕುಣಿಕೆ ತುಂಡಾಗಿ ಸಾವು !

ಉಡುಪಿ: ವ್ಯಕ್ತಿಯೊಬ್ಬರು ಮನೆಯ ಮೊದಲ ಅಂತಸ್ತಿನ ಮೇಲ್ಪಾವಣೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾಗ, ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಸಂಭವಿಸಿದೆ. ಈ ವ್ಯಕ್ತಿ ನೇಣು ಕುಣಿಕೆಯಲ್ಲಿ ನರಳಾಡುತ್ತಿದ್ದಾಗ, ದೇಹದ ಭಾರದಿಂದ ಹಗ್ಗ ತುಂಡಾದ ಪರಿಣಾಮ ವ್ಯಕ್ತಿ 20 ಅಡಿಗಿಂತಲೂ ಎತ್ತರದಿಂದ ಮನೆಯ ಹೊರಾಂಗಣದಲ್ಲಿ ಬಿದ್ದಿದ್ದಾರೆ. ತಲೆ ಭಾಗಕ್ಕಾದ ಗಂಭೀರ ಸ್ವರೂಪದ ಗಾಯದಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಎಫ್.ಜೆ.ಎ. ಫೆರ್ನಾಂಡಿಸ್‌ ಎಂಬವರ ಪುತ್ರ ಮೆಸ್ರಾಯ್ (55) ಎಂದು ಗುರುತಿಸಲಾಗಿದೆ. […]