ಮಣಿಪಾಲ: ಒಂದು ಸ್ಕೂಟರ್ನಲ್ಲಿ ಐದು ಮಂದಿ ವಿದ್ಯಾರ್ಥಿಗಳು ಸವಾರಿ; ಪೊಲೀಸರಿಂದ ದಂಡ.!

ಮಣಿಪಾಲ: ವಾಹನ ಕಾಯ್ದೆಯನ್ನು ಉಲ್ಲಂಘಿಸಿ ಅಪಾಯಕಾರಿಯಾಗಿ ಸ್ಕೂಟರ್ ಚಾಲನೆ ಮಾಡಿದ ವಿದ್ಯಾರ್ಥಿಗಳಿಗೆ ಮಣಿಪಾಲ ಪೊಲೀಸರು ದಂಡ ವಿಧಿಸಿದ್ದಾರೆ. ಎ.17ರಂದು ರಾತ್ರಿ ವೇಳೆ ಮಣಿಪಾಲದಲ್ಲಿ ಒಂದು ಸ್ಕೂಟರ್ನಲ್ಲಿ ಓರ್ವ ಸವಾರ ಹಾಗೂ ನಾಲ್ಕು ಮಂದಿ ಸಹ ಸವಾರರು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಣಿಪಾಲ ಪೊಲೀಸರು ರವಿವಾರ ಸ್ಕೂಟರ್ ಸವಾರರನ್ನು ಮತ್ತು ಸ್ಕೂಟರನ್ನು ಪತ್ತೆ ಹಚ್ಚಿದರು. ಸ್ಕೂಟರ್ ಸವಾರರು ಮಣಿಪಾಲದ ಮಾಹೆಯ ಇಬ್ಬರು ವಿದ್ಯಾರ್ಥಿಗಳು […]