ಮಣಿಪಾಲ್‌ ಮ್ಯಾರಥಾನ್ ನಲ್ಲಿ ಸಾವಿರಾರು ಜನ ಭಾಗಿ

ಮಣಿಪಾಲ: ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ನಡೆಸಿಕೊಂಡು ಬರುತ್ತಿರುವ ದೇಶದ ಪ್ರತಿಷ್ಠಿತ ಮಣಿಪಾಲ್ ಮ್ಯಾರಥಾನ್ ಏಳನೇ ಆವೃತ್ತಿ ಭಾನುವಾರ ನಡೆಯಿತು. ಭಾರತ ಸೇರಿದಂತೆ ಅನೇಕ ದೇಶಗಳ ಕ್ರೀಡಾಪಟುಗಳು ಈ ಮ್ಯಾರಥಾನ್ ನಲ್ಲಿ ಭಾಗಿಯಾದರು. 42kmಗಳ ಫುಲ್ ಮ್ಯಾರಥಾನ್ ಸಹಿತ ವಿವಿಧ ಹಂತಗಳಲ್ಲಿ ಸ್ಪರ್ಧಾಕೂಟ ನಡೆಯಿತು.ದೇಶದಲ್ಲೇ ಪ್ರತಿಷ್ಠಿತ ಎನಿಸಿರುವ ಮಣಿಪಾಲ್‌ ಮ್ಯಾರಥಾನ್ ಮುಂಜಾನೆ ಆರಂಭಗೊಂಡಿತು.ಸುಮಾರು 17,000ಕ್ಕೂ ಅಧಿಕ ಮಂದಿ ಓಟಗಾರರು ದೇಶವಿದೇಶಗಳಿಂದ ಈ ಮ್ಯಾರಥಾನ್ ನಲ್ಲಿ ಭಾಗಿಯಾದರು. ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಎಂಬ ಘೋಷ ವಾಕ್ಯದೊಂದಿಗೆ ಮ್ಯಾರಾಥಾನ್ […]