ಮಣಿಪಾಲ: ಪಿಎಚ್‌ಡಿ ವಿದ್ಯಾರ್ಥಿನಿ ಆತ್ಮಹತ್ಯೆ
ಮಣಿಪಾಲ: ಮಣಿಪಾಲದ ಎಂಐಟಿಯ ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬರು ಮಾನಸಿಕ ಖಿನ್ನತೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.22ರಂದು ಮಣಿಪಾಲದಲ್ಲಿ ನಡೆದಿದೆ. ಮೃತರನ್ನು ಮಂಗಳೂರು ಕೋಡಿಕಲ್ ಜೆ.ಬಿ.ಲೋಬೊ ರಸ್ತೆ ನಿವಾಸಿ ಬಸವ ಕುಮಾರ್ ಎಂಬವರ ಮಗಳು ವೈದೇಹಿ(26) ಎಂದು ಗುರುತಿಸಲಾಗಿದೆ. ಮಣಿಪಾಲದ ಎಂಐಟಿಯಲ್ಲಿ ಬಯೋ ಮೆಡಿಕಲ್ ವಿಭಾಗದಲ್ಲಿ ಪಿಎಚ್‌ಡಿ 3ನೇ ವರ್ಷದ ವಿದ್ಯಾಭ್ಯಾಸ ಮಾಡಿಕೊಂಡಿದ್ದ ಇವರು, ಎಂಐಟಿ ಕ್ವಾರ್ಟಸ್‌ನಲ್ಲಿ ವಾಸವಾಗಿದ್ದರು. ವಿದ್ಯಾಭ್ಯಾಸದ ಒತ್ತಡದಿಂದ ಎರಡು ತಿಂಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ಬೆಳಗ್ಗೆ 11:30 ಗಂಟೆಯಿಂದ ಸಂಜೆ […]