ಮಣಿಪಾಲದಲ್ಲಿ ಒಳಚರಂಡಿಗೆ ಕೊಳಚೆ ನೀರು ಬಿಡುವ ಹೋಟೆಲ್, ಅಪಾರ್ಟ್ ಮೆಂಟ್ ಗಳ ನೀರು ಸಂಪರ್ಕ‌ ಕಡಿತ: ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ

ಉಡುಪಿ: ಮಣಿಪಾಲ ನಗರ ವ್ಯಾಪ್ತಿಯಲ್ಲಿ ಒಳಚರಂಡಿಗೆ ಹೋಟೆಲ್, ಅಪಾರ್ಟ್ ಮೆಂಟ್ ಗಳಿಂದ ಕೊಳಚೆ ನೀರು ಬಿಡಲಾಗುತ್ತಿದ್ದು, ಈಗಾಗಲೇ ಅಂತಹ ಹೋಟೆಲ್, ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ಜಾರಿಗೊಳಿಸಿ ತಲಾ 25 ಸಾವಿರ ದಂಡ ವಿಧಿಸಲಾಗಿದೆ. ಇದೇ ರೀತಿ ಕೊಳಚೆ ನೀರು ಬಿಡುವುದನ್ನು ಮುಂದುವರಿದರೆ ನೀರಿನ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ನಗರಸಭೆಯ ಸಹಾಯಕ ಅಭಿಯಂತರ ದುರ್ಗಾಪ್ರಸಾದ್ ತಿಳಿಸಿದರು. ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ […]