ಮಣಿಪಾಲ: ‘ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡಿ’ಯೆಂದು ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನೇಣಿಗೆ ಶರಣು

ಮಣಿಪಾಲ: ಅನಾರೋಗ್ಯದಿಂದ ಬೇಸತ್ತ ವ್ಯಕ್ತಿಯೊಬ್ಬರು ಮನೆಯ ಮಾಡಿನ ಕಬ್ಬಿಣಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಿವಳ್ಳಿ ಗ್ರಾಮದ ರಾಮಚಂದ್ರ ಭಟ್ ಎಂದು ಗುರುತಿಸಲಾಗಿದೆ. ಇವರು ಡೆತ್ ನೋಟ್ ಬರೆದಿಟ್ಟು ಏ.1ರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ “ನಾನು ಅನಾರೋಗ್ಯದಿಂದ ಜೀವನದಲ್ಲಿ ಬೇಸರಗೊಂಡು ವೈರಾಗ್ಯ ತಾಳಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ‌. ಇದಕ್ಕೆ ಬೇರೆ ಯಾರು ಕಾರಣರಲ್ಲ. ಆರಕ್ಷಕ ಅಧಿಕಾರಿಗಳಲ್ಲಿ […]