ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ 2025 ರ ಅಪರೂಪದ ರೋಗಗಳ ಬಗ್ಗೆ ಬೀದಿ ನಾಟಕ ಜಾಗೃತಿ ಅಭಿಯಾನ ಕಾರ್ಯಕ್ರಮ

ಮಣಿಪಾಲ: ಅಪರೂಪದ ಕಾಯಿಲೆಗಳ ದಿನವನ್ನು ಗುರುತಿಸಿ, ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ತಳಿಶಾಸ್ತ್ರ (ಮೆಡಿಕಲ್ ಜೆನೆಟಿಕ್ಸ್ ) ವಿಭಾಗವು ಇಂದು ಫೆಬ್ರವರಿ 27 ರಂದು ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು. ಪ್ರತಿ ವರ್ಷ ಫೆಬ್ರವರಿ 28 ರಂದು ಜಾಗತಿಕವಾಗಿ ಅಪರೂಪದ ಕಾಯಿಲೆಗಳ ದಿನವನ್ನು ಆಚರಿಸಲಾಗುತ್ತದೆ, 2025 ರ ಥೀಮ್ “ನೀವು ಊಹಿಸುವುದಕ್ಕಿಂತ ಹೆಚ್ಚು: ಅಪರೂಪದ ಅನುಭವಗಳ ಸಂಕಲನ”. ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ […]